ಮೇ.19: ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಭಾಷಾ ಬೋಧನಶಾಸ್ತ್ರ ವಿಭಾಗದ ವಿದ್ಯಾರ್ಥಿ ಶಿಕ್ಷಕರು ಆಯೋಜಿಸಿದ್ದ ಕಾರ್ಯಕ್ರಮವು ಡಾ: ಮಹಾಬಲೇಶ್ವರ ರಾವ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಭಾಷೆ ಮತ್ತು ಸಾಹಿತ್ಯ ಎಂಬ ಪರಿಕಲ್ಪನೆಯನ್ನು ಒಳಗೊಂಡ ಈ ಕಾರ್ಯಕ್ರಮದ ಆಧ್ಯಕ್ಷರಾದ ಡಾ: ಮಹಾಬಲೇಶ್ವರ ರಾವ್ “ಯಾವುದೇ ಭಾಷೆಯನ್ನು ಬೋಧನೆ ಮಾಡುವವರು ಚಿಂತನೆ, ಆಲಿಸುವಿಕೆ, ಮಾತು, ಓದು ಮತ್ತು ಬರಹ ಈ ಐದು ಕೌಶಲಗಳಲ್ಲಿ ಪಾರಂಗತರಾಗಬೇಕು. ಹಾಗೆ ಆದಾಗಲೆ ಅವರು ಪರಿಣತ ಭಾಷಾ ಶಿಕ್ಷಕರಾಗಲು ಸಾಧ್ಯ. ಇದಕ್ಕೆ ಸತತವಾದ ಅಧ್ಯಯನ, ಅವಲೋಕನ ಮತ್ತು ಪರಿಶ್ರಮ ಅವಶ್ಯಕ. ಭಾಷಾ ಶಿಕ್ಷಕರಾಗಲಿರುವ ವಿದ್ಯಾರ್ಥಿ ಶಿಕ್ಷಕರು ಈ ನಿಟ್ಟಿನಲ್ಲಿ ಶ್ರಮಿಸಬೇಕು” ಎಂದು ನುಡಿದರು.
ವಿದ್ಯಾರ್ಥಿ ಶಿಕ್ಷಕರು ಪ್ರಬಂಧ ಮಂಡನೆ, ಕಿರುಪ್ರಹಸನ, ಚರ್ಚೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಕ್ಯಾರೊಲ್ ಮೊನಿಶಾ ಸ್ವಾಗತಿಸಿದರು. ಅಂಜುಮ್ ಧನ್ಯವಾದವನ್ನಿತ್ತರು. ಅನಿಶಾ ಕಾರ್ಯಕ್ರಮ ನಿರ್ವಹಿಸಿದರು.